Avarivara Jothe Lyrics
- Genre:Acoustic
- Year of Release:2022
Lyrics
ನಗುವೆಲ್ಲಾ ನನಗಾಗಿ ಕೂಡಿಹಾಕು
ಮುನಿಸನ್ನೂ ಬರದಂತೆ ದೂರ ನೂಕೂ
ಮನಸ್ಸಲ್ಲಿ ಮರೆಮಾಚಿ ಇಟ್ಟ ಎಲ್ಲಾ
ಗುಟ್ಟುಗಳಾ ನನ್ನೆದುರೇ ತೆರೆಯ ಬೇಕೂ
ಏನ್ನನ್ನೋ ಹುಡುಕುವಾ ಘಳಿಗೆ
ನನ್ನ ನಗುವೆ ನಿನಗೆ ಸಿಗಲೀ
ಯಾರನ್ನೂ ಕರೆಯುವಾ ಕ್ಷಣದಿ
ನನ್ನ ಹೆಸರೇ ಮೊದಲು ಬರಲೀ
ಬೇರೆಯೇನೂ
ಯೋಚಿಸದೆ ನನ್ನ ಪ್ರೀತಿಸು
ನಿನ್ನಾ ಎಲ್ಲಾ ಆಸೆಗಳಾ ಸಾಲಿನಲ್ಲಿ
ಎಂದು ನನ್ನ ಮುಂದೆ ಇರಿಸು
ಅವರಿವರ ಜೊತೆ ಸೇರದೆ
ಅವರಿವರ ನೋಡಿ ಕೇಳದೇ