Naa Bareda Kavite Lyrics
- Genre:Pop
- Year of Release:2021
Lyrics
ನಿನ್ನ ಕಂಡ ಕ್ಷಣದಲ್ಲೇ ನನ್ನೇ ನಾ ಮರೆತೇ
ಪ್ರತಿ ಸಲವೂ ನಿನ್ನೇ ಹುಡುಕಿ ಬಂದೆ
ಬರೀ ನಿನ್ನ ನೆನಪೇ ಈ ಮನದ ಪುಟದೊಳಗೆ
ಅದು ಏಕೋ ಏನೋ ನಾನು ಕಾಣೆ
ಕರಗುತಿರೊ ಗಂಧದ ಮತ್ತಲ್ಲೇ ನಾ ಕಳೆದೆ
ಅಣು ಅಣುವಾಗಿ ನಿನ್ನಲ್ಲೇ ಬೆರೆತೆ
ಕನವರಿಸಿದೆ ನಾ ಕುಳಿತಲ್ಲೇ
ಈ ನಿನ್ನ ಹೆಸರನ್ನೇ
ಮತ್ತೆರಡು ಬಾರಿ ಕೂಗಿ ಕರೆದೆ
ಮಸುಕಾದ ಸಂಜೆಯಲ್ಲಿ ಈ ಘಳಿಗೆಯಲ್ಲಿ
ನೀ ಕಂಡೆ
ಈ ನಿನ್ನ ಕಿರುನಗೆಯು, ಆ ಮುಂಗುರುಳು
ನಾ ಸೋತೆ
ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ
ಕನಸಲ್ಲೂ ಈ ನಿನ್ನ ನೆರಳೆ
Oh yeah
ಕರೆದಾಗ ಒನೆ, ಕನಸುಗಳು ಕಾಣೆ
ನಿನಗಾಗೇ ನಾ ಬರೆದಾ, ಕವಿತೆ
ಈ ನನ್ನ ಕವಿತೆ
ನಿನ್ನ ಕಂಡ ಕ್ಷಣದಲ್ಲೇ ನನ್ನೇ ನಾ ಮರೆತೇ
ಪ್ರತಿ ಸಲವೂ ನಿನ್ನೇ ಹುಡುಕಿ ಬಂದೆ
ಬರೀ ನಿನ್ನ ನೆನಪೇ ಈ ಮನದ ಪುಟದೊಳಗೆ
ಅದು ಏಕೋ ಏನೋ ನಾನು ಕಾಣೆ
ಮಸುಕಾದ ಸಂಜೆಯಲ್ಲಿ ಈ ಘಳಿಗೆಯಲ್ಲಿ
ನೀ ಕಂಡೆ
ಈ ನಿನ್ನ ಕಿರುನಗೆಯು, ಆ ಮುಂಗುರುಳು
ನಾ ಸೋತೆ
ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ
ಕನಸಲ್ಲೂ ಈ ನಿನ್ನ ನೆರಳೆ
ಕರೆದಾಗ ಒನೆ, ಕನಸುಗಳು ಕಾಣೆ
ನಿನಗಾಗೇ ನಾ ಬರೆದಾ, ಕವಿತೆ
ಈ ನನ್ನ ಕವಿತೆ
ನಾ ಬರೆದಾ ಕವಿತೆ
ಈ ನನ್ನ ಕವಿತೆ