![NAMMA RAITA NAMMA USIRU FDG KUMAR B K](https://source.boomplaymusic.com/group10/M00/01/03/5171b7d3ef2b4990af7e9d436c7c74c3_464_464.jpg)
NAMMA RAITA NAMMA USIRU FDG KUMAR B K Lyrics
- Genre:Folk
- Year of Release:2022
Lyrics
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ರೈತ ನ್ನೀನೇ ದೈವಾ ನೀನೇ ನಮ್ಮ ಜೀವಾ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ರೈತ ನ್ನೀನೇ ದೈವಾ ನೀನೇ ನಮ್ಮ ಜೀವಾ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ಮಣ್ಣಿನ ಮಗನು ಅವನು
ಹೊನ್ನಿನ ಗುಣದ ಭಾವವು
ಲೋಕದ ಒಡೆಯ ಅವನು
ದೇವರ ಮನದ ರೂಪವು
ದುಡಿಮೆ ಒಂದೇ ಅವನ ಕಾಯಕ
ಅವನೇ ನೋಡು ನೆಲದ ನಾಯಕ
ಗದ್ದೆಯಲ್ಲಿ ಇದ್ದರೇನು
ಭೂ ಗದ್ದುಗೆ ಆಳಬಲ್ಲ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ರೈತ ನ್ನೀನೇ ದೈವಾ ನೀನೇ ನಮ್ಮ ಜೀವಾ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ಕಷ್ಟ ನಷ್ಟ ಏನೇ ಬರಲಿ
ಬೆವರು ಸುರಿಸಿ ದುಡಿವನು
ನೋವು ನಲಿವು ಏನೇ ಇರಲಿ
ನಗುತಾ ಜೀವನ ನೂಕುವನು
ಮನದ ತುಂಬ ನೂರು ಚಿಂತೆ
ಮುಖದಿ ಮಾತ್ರ ಮಂದಹಾಸ
ಮಳೆಯ ಚಳಿಯ ಬಿಸಿಲನುಂಡು
ಜಗಕೆ ಅನ್ನ ಕೊಡುವನು
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ರೈತ ನ್ನೀನೇ ದೈವಾ ನೀನೇ ನಮ್ಮ ಜೀವಾ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ಯಾರ ಹಂಗು ಅವನಿಗಿಲ್ಲ
ಭೂಮಿಯ ಸಂಗ ಬಿಡುವುದಿಲ್ಲ
ಕೋಟಿ ಬಂದು ಕೋಟಿ ಹೋದರು
ಅವನ ದುಡಿಮೆಗೆ ಸಾಟಿಯಿಲ್ಲ
ಏಳು ಬೀಳು ಸಹಿಸಿಕೊಂಡು
ಪ್ರೀತಿ ಸ್ನೇಹ ಹಂಚಿಕೊಂಡು
ಎಲ್ಲರೆದೆಯ ಗೆಲ್ಲುವಾತ
ಬಿಡದೆ ಅನ್ನ ನೀಡುವಾತ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ರೈತ ನ್ನೀನೇ ದೈವಾ ನೀನೇ ನಮ್ಮ ಜೀವಾ
ನಮ್ಮ ರೈತ ನಮ್ಮ ಉಸಿರು
ಉಣ್ಣುವಾಗ ನೆನೆಯಬೇಕು ಅವನ ಹೆಸರು
ರೈತ ನ್ನೀನೇ ದೈವಾ ನೀನೇ ನಮ್ಮ ಜೀವಾ
ಅಣ್ಣದಾತೋ ಸುಖಿಭವ
ಅಣ್ಣದಾತೋ ಸುಖಿಭವ
ಅಣ್ಣದಾತೋ ಸುಖಿಭವ
ಅಣ್ಣದಾತೋ ಸುಖಿಭವ